ಹಳ್ಳಿಯಾದರೇನು ಶಿವಾ

ಪಿ. ಬಿ. ಶ್ರೀನಿವಾಸ್ ಚಿ. ಉದಯಶಂಕರ್ ರಾಜನ್-ನಾಗೇಂದ್ರ

ಹಳ್ಳಿಯಾದರೇನು ಶಿವಾ

ಡಿಲ್ಲಿಯಾದರೇನು ಶಿವಾ

ಜನರೆಲ್ಲ ಒಂದೇ ಶಿವಾ

ಎಲ್ಲಾ ನಿನ್ನಂತೆ ಶಿವಾ

ಜಗವೆಲ್ಲಾ ನಿನ್ನದೇ ಶಿವಾ || ಪ ||

ಎಲ್ಲಾ ಸಂಪತ್ತನ್ನಿಟ್ಟೆ ಎಲ್ಲರಿಗೆಂದೇ ಕೊಟ್ಟೆ

ಹಂಚಿಕೊಂಡು ಬಾಳಲರಿಯದ ದುರಾಸೆ ಜನ

ವಂಚನೆಯನ್ನು ಮಾಡುತಿರುವರೋ ಬಡವರನ್ನು ತುಳಿದು

ಅಹಂಕಾರದಲ್ಲಿ ಮೆರೆದು ಅನ್ಯಾಯ ಮಾಡುತಿರುವರೊ || 1 ||

ಮಹಡಿಯಲ್ಲಿದ್ದರೇನು ಗುಡಿಸಲಲ್ಲಿದ್ದರೇನು

ಹಸಿವಿಗೆ ಅನ್ನ ತಿನ್ನದೆ ಚಿನ್ನವನ್ನು ತೆನ್ನಲು ಸಾಧ್ಯವೇನು

ಸ್ವಾರ್ಥದಿಂದ ಕೂಡಿ ಏನೇನೊ ಆಟವಾಡಿ

ಬರಿಗೈಲಿ ಕಡೆಗೆ ನಡೆವರೊ || ೨ ||